ನಮಸ್ಕಾರ!
ನನ್ನ ಮಿತ್ರರಿಂದ ಬಂದ ಅಪಾರವಾದ ಕೋರಿಕೆಗಳ ಮೇರೆಗೆ ಇಲ್ಲಿ "ವಿಂಡೋಸ್ ಗಣಕದಲ್ಲಿ ಕನ್ನಡವನ್ನು ಹೇಗೆ ಬಳಸಬಹುದು" ಎಂದು ವಿವರಿಸಲು ಪ್ರಯತ್ನಿಸುತ್ತಿದ್ದೇನೆ.
ನಾನು ಇಲ್ಲಿ ತಿಳಿಸಿರುವ ಹಂತಗಳನ್ನು ಸ್ವತಃ ವಿಂಡೋಸ್ ೭, ವಿಂಡೋಸ್ ೮, ವಿಂಡೋಸ್ ೮.೧ ಹಾಗೂ ವಿಂಡೋಸ್೧೦ ಆವೃತ್ತಿಗಳಲ್ಲಿ ಪರೀಕ್ಷಿಸಿದ್ದೇನೆ. ಹೇಗೂ, ನಿಮಗೆ ಕೊನೆಯಲ್ಲಿ ಯಾವುದೇ ಪ್ರಶ್ನೆ ಉಳಿದಿದ್ದರೂ ಅಥವಾ ನೀವು ಈ ಹಂತಗಳನ್ನು ಪ್ರಯತ್ನಿಸುವಾಗ ಎದುರಾಗಬಹುದಾದ ಯಾವುದೇ ಸಮಸ್ಯೆಗಳಿಗೆ ಈ ಲೇಖನದ ಕೆಳಗಡೆ ಇರುವ ಪ್ರತಿಕ್ರೀಯೆ ವಿಭಾಗ ಅಥವಾ ನಮ್ಮ ಪ್ರಮಾಣಿತ ತಾಣದ ಅನಿಸಿಕೆ ಪುಟದ ಮೂಲಕ ನನಗೆ ತಿಳಿಸಿ.
ಕನ್ನಡವನ್ನು ಗಣಕದಲ್ಲಿ ಬಳಸುವುದು ಈಗ ಮೊದಲಿಗಿಂತಲೂ ತುಂಬಾ ಸರಳವಾಗಿದೆ. ಇದರಲ್ಲಿ ಮೈಕ್ರೋಸಾಫ್ಟ್ ಭಾಷಾ ಸಂಸ್ಥೆಯ ಕಾರ್ಯ ತುಂಬಾ ಮಹತ್ವದ್ದಾಗಿದೆ. ಮೈಕ್ರೋಸಾಫ್ಟ್ ನ ಈ ಅಂಗಸಂಸ್ಥೆಯು ಕನ್ನಡವನ್ನೊಳಗೊಂಡಂತೆ ಭಾರತೀಯ ಭಾಷೆಗಳನ್ನು ಗಣಕದಲ್ಲಿ ಬಳಸುವಿಕೆಯ ಬಗ್ಗೆ ಅನೇಕ ಪ್ರಯೋಗಗಳನ್ನು ಕೈಗೊಂಡು ಅವುಗಳಲ್ಲಿ ಸಫಲತೆಯನ್ನು ಕಂಡುಕೊಂಡಿದೆ. ಇದರಿಂದಾಗಿ ವಿಂಡೋಸ್ ವ್ಯವಸ್ಥೆಯು ವಿವಿಧ ಭಾಷಾ ವರ್ಗದ ಜನರಿಗೆ ಇನ್ನೂ ಹತ್ತಿರವಾಗಿದೆ.
ನೀವೂ ಕನ್ನಡವನ್ನು ನಿಮ್ಮ ಗಣಕದಲ್ಲಿ ಬಳಸಲು ಕಾತುರರಾಗಿದ್ದೀರಾ? ಹಾಗಿದ್ದರೆ ಈ ಕೆಳಗಿನ ಹಂತಗಳನ್ನು ಅನುಸರಿಸಿ.
ಹಂತ ೧:
ಕನ್ನಡವನ್ನು ಗಣಕದಲ್ಲಿ ಬಳಸಲು ಮೊದಲು “ ಮೈಕ್ರೋಸಾಫ್ಟ್ ಇಂಡಿಕ್ ಲ್ಯಾಂಗ್ವೇಜ್ ಇನ್ಫುಟ್ ಟೂಲನ್ನು” ಇಲ್ಲಿಂದ ಗಣಕ್ಕಕ್ಕಿಳಿಸಿ.
ನೀವೂ ಕನ್ನಡವನ್ನು ನಿಮ್ಮ ಗಣಕದಲ್ಲಿ ಬಳಸಲು ಕಾತುರರಾಗಿದ್ದೀರಾ? ಹಾಗಿದ್ದರೆ ಈ ಕೆಳಗಿನ ಹಂತಗಳನ್ನು ಅನುಸರಿಸಿ.
ಹಂತ ೧:
ಕನ್ನಡವನ್ನು ಗಣಕದಲ್ಲಿ ಬಳಸಲು ಮೊದಲು “ ಮೈಕ್ರೋಸಾಫ್ಟ್ ಇಂಡಿಕ್ ಲ್ಯಾಂಗ್ವೇಜ್ ಇನ್ಫುಟ್ ಟೂಲನ್ನು” ಇಲ್ಲಿಂದ ಗಣಕ್ಕಕ್ಕಿಳಿಸಿ.
ಹಂತ ೨:
ಮೇಲಿನ ಕೊಂಡಿಯಿಂದ ನೀವು ತೊಂದರೆ ಎದುರಿಸಿದ್ದರೆ, ಈ ಪರ್ಯಾಯ ವಿಧಾನವನ್ನು ಬಳಸಿ ಅದನ್ನು ಪಡೆಯಬಹುದು. ಈ ಪರ್ಯಾಯ ವಿಧಾನದಲ್ಲಿ .exe ಹಾಗೂ .zipx ರೂಪದ ಕಡತಗಳನ್ನು ಇರಿಸಲಾಗಿದೆ.
ನಿಮ್ಮ ಬಳಿ WinZip ಅಥವಾ ಸಮನಾದ ಉಪಕರಣವಿಲ್ಲದಿದ್ದರೆ ಅದನ್ನು ಉಚಿತವಾಗಿ ಇಲ್ಲಿ ಪಡೆಯಬಹುದು.
ಹಂತ ೩:
ಇಳಿಸಿಕೊಂಡ ಕಡತವನ್ನು ನಿರ್ವಾಹಕ ಕ್ರಮದಲ್ಲಿ (Run as Administrator) ತೆರೆಯಿರಿ.
ಹಂತ ೪:
ನೀವು ಅನುಮತಿಯ ಬಗ್ಗೆ ಕೆಳಲ್ಪಟ್ಟರೆ "Yes" ಆಯ್ಕೆ ಮಾಡಿ. ಹಾಗೂ ಕಡತ ಅನುಸ್ತಾಪನೆಗೊಳ್ಳುವವರೆಗೆ ನಿರೀಕ್ಷಿಸಿ.
ಹಂತ ೫:
ಕಡತವು ಅನುಸ್ತಾಪನೆಗೊಂಡ ಮೇಲೆ "ಮುಂದೆ (Next)" ಗುಂಡಿಯನ್ನು ಒತ್ತಿ. ಇಲ್ಲಿ ನೀವು ಬಯಸುವ ಯಾವುದೇ ಐಚ್ಛಿಕ ನಿಲುವನ್ನು ಆಯ್ಕೆ ಮಾಡಬಹುದು - ಈ ತಂತ್ರಾಂಶದ ಮೇಲ್ವಿಚಾರಣೆಯ ಬಗ್ಗೆ ಸೂಚನೆ ಪಡೆಯುವಿಕೆ ಹಾಗೂ ಮೈಕ್ರೋಸಾಫ್ಟ್ ನ ಈ ತಂತ್ರಾಂಶವನ್ನು ಇನ್ನೂ ಉತ್ತಮಗೊಳಿಸಲು ನೀವು ಭಾಗಿಯಾಗುವಂತೆ ಆಯ್ಕೆಮಾಡಬಹುದು.
ಹಂತ ೬:
ನಿಯಮಗಳಿಗೆ ನಿಮ್ಮ ಸಮ್ಮತಿಯನ್ನು ಸೂಚಿಸಿ, "ಅನುಸ್ತಾಪಿಸು (Install)" ಗುಂಡಿಯನ್ನು ಒತ್ತಿರಿ.
ಹಂತ ೭:
ಅನುಸ್ತಾಪನೆ ಮುಗಿಯುವವರೆಗೆ ತಾಳ್ಮೆಯಿಂದಿರಿ.
ಹಂತ ೮:
ಅನುಸ್ತಾಪನೆಯು ಯಶಸ್ವಿಯಾಗಿ ಮುಗಿದಮೇಲೆ "ಮುಚ್ಚು (Close)" ಗುಂಡಿಯನ್ನು ಒತ್ತಿ.
ಹಂತ ೯:
ಹುರ್ರೇ... ಈಗ ಕನ್ನಡವನ್ನು ನಿಮ್ಮ ಗಣಕದಲ್ಲಿ ಬಳಸಲು ಸಂಪೂರ್ಣ ತಯಾರಿ ಮುಗಿದಿದೆ!
ನಿಮ್ಮ ಗಣಕದಲ್ಲಿಯ ಮೊದಲ ಕನ್ನಡ ಬಳಕೆಯನ್ನು ಪರೀಕ್ಷಿಸಲು ಒಂದು ಹೊಸ ನೋಟ್ ಪ್ಯಾಡ್ ತೆರೆಯಿರಿ.
ಹಂತ ೧೦:
ಇನ್ಫುಟ್ ಕರ್ಸರ್ ನೋಟ್ ಪಾಡ್ ನಲ್ಲಿರುವಂತೆ ನೋಡಿಕೊಳ್ಳಿ.
ಹಂತ ೧೧:
ಈಗ ಸ್ಟೇಟಸ್ ಬಾರಿನಲ್ಲಿ ಬಲಗೈ ಬದಿಯಲ್ಲಿ "EN ಅಥವಾ ENG" ಹೆಸರಿನ ಒಂದು ಭಾಷಾ ಬಿಂಬವನ್ನು ಕಾಣಬಹುದು. ಅದರ ಮೇಲೆ ಒತ್ತಿರಿ.
ಹಂತ ೧೨:
ತೆರೆಯುವ ಕಿರು ಕಿಂಡಿಯಲ್ಲಿ "KD ಅಥವಾ KAN" ಹೆಸರಿನ "Kannada (India)" ಆಯ್ಕೆಯನ್ನು ಆರಿಸಿಕೊಳ್ಳಿ.
ಹಂತ ೧೩:
ಈಗ ನಿಮ್ಮ ಇನ್ಫುಟ್ ಕರ್ಸರ್ ನೋಟ್ ಪಾಡ್ ನಲ್ಲಿರುವುದರ ಜೊತೆಗೆ ಸ್ಟೇಟಸ್ ಬಾರ್ ನಲ್ಲಿಯ ಭಾಷಾ ಬಿಂಬವು "KD" ಹೆಸರಿನೊಂದಿಗೆ, ಕನ್ನಡದ "ಅ" ಅಕ್ಷರ ತೋರಿಸುವುದನ್ನು ಕಾಣಬಹುದು.
ಹಂತ ೧೪:
ಈಗ ನೋಟ್ ಪಾಡ್ ನಲ್ಲಿ "Kannada" ಎಂದು ಛಾಪಿಸಿ ಹಾಗೂ ತೆರೆಯುವ ಕಿರು ಕೊಂಡಿಯಲ್ಲಿ ನಿಮಗೊಪ್ಪುವ ಆಯ್ಕೆಯನ್ನು ಆರಿಸಲು ಕೀಲಿಮಣೆಯ ಮೇಲೆ-ಕೆಳಗಿನ ಗುಂಡಿಗಳನ್ನು ಬಳಸಿ. ನಿಮಗೊಪ್ಪುವ ಆಯ್ಕೆಯು ಪ್ರಮುಖವಾದಾಗ ಸ್ಪೇಸ್ ಅಥವಾ ಎಂಟರ್ ಗುಂಡಿಯನ್ನು ಒತ್ತಿ.
ಹಂತ ೧೫:
ಈಗ ಎರಡನೆಯ ಹಾಗೂ ಮುಂದಿನ ಎಲ್ಲ ಪದವನ್ನೂ(ಗಳನ್ನೂ) ಇದೇ ರೀತಿ ಛಾಪಿಸಿ.
ಹಂತ ೧೬:
ಎಲ್ಲ ಮುಗಿದ ನಂತರ ಕಡತವನ್ನು ಉಳಿಸಲು "ಹೀಗೆ ಉಳಿಸು (Save as)" ಆಯ್ಕೆ ಮಾಡಿ.
ಹಂತ ೧೭:
ತೆರೆಯುವ ಪಾಪ್ ಅಪ್ ನಲ್ಲಿ ನಿಮಗೆ ಬೇಕಾದ ಮಾರ್ಗ ಹಾಗೂ ಕಡತದ ಹೆಸರನ್ನು ನಮೂದಿಸಿ (ನೆನಪಿರಲಿ ಇಲ್ಲಿಯೂ ನೀವು ಕನ್ನಡವನ್ನು ಬಳಸಬಹುದು! ಹಾಗಾದರೆ ಈ ಕಡತಕ್ಕೆ ಕನ್ನಡದಲ್ಲಿಯೇ ಒಂದು ಹೆಸರಿಡಿದಿ).
ಹಂತ ೧೮:
ಸಂಕೇತಿಸುವಿಕೆ(Encoding)ಯಲ್ಲಿ "UTF-8 ಅಥವಾ UTF-16" ಆಯ್ಕೆ ಮಾಡಿ.
ಹಂತ ೧೯:
ಉಳಿಸು (Save) ಮೇಲೆ ಒತ್ತಿರಿ.
ಶುಭಾಷಯಗಳು!!! ನೀವೀಗ ಯಶಸ್ವಿಯಾಗಿ ಗಣಕದಲ್ಲಿ ಕನ್ನಡವನ್ನು ಬಳಸಲಾರಂಭಿಸಿದ್ದೀರಿ.
ಯಾವುದೇ ಹೊಸತಾಗಿರುವುದನ್ನು ಅನುಸರಿಸುವಾಗ ಸಮಸ್ಯೆಗಳು ಎದುರಾಗುವುದು ಸಹಜ. ಈ ಪ್ರಕ್ರೀಯೆಯಲ್ಲಿ ನಿಮಗೇನಾದರೂ ತೊಂದರೆಯಾಗಿದ್ದರೆ ದಯವಿಟ್ಟು ಕೆಳಗಡೆಯ "ಪ್ರತಿಕ್ರೀಯೆ ವಿಭಾಗ" ಅಥವಾ "ನಮ್ಮ ಪ್ರಮಾಣಿತ ತಾಣದ ಅನಿಸಿಕೆ ವಿಭಾಗದ (ಫೀಡ್ಬ್ಯಾಕ್)" ಮೂಲಕ ನಮಗೆ ತಿಳಿಸಿ.
ಧನ್ಯವಾದಗಳು.
ಕೊನೆಯಲ್ಲಿ ನೀವು ಯಾವುದೇ ಸಮಸ್ಯೆ ಎದುರಿಸಿತ್ತಿದ್ದಲ್ಲಿ, ಈ ಕಡತವು ನೆರವಾಗಬಹುದು ಅಥವಾ ಮೈಕ್ರೋಸಾಫ್ಟ್ ಭಾಷಾ ಇಂಡಿಯಾದ ಮಾಹಿತಿಪುಟಕ್ಕೆ ಭೇಟಿನೀಡಬಹುದು.