"ಸರ್ಕಾರವು ಗೋಹತ್ಯೆಯನ್ನು ನಿಷೇಧಿಸಬೇಕೆ ಅಥವಾ ಬೇಡವೆ" ಎಂದು ಯಾವತ್ತಾದರೂ ಯೋಚಿಸಿದ್ದೀರಾ?
ನಾನಂತೂ ಯಾವಾಗಲು "ಸಮಸ್ಯೆಯ ಪರಿಹಾರವು ನೇರವಾಗಿರುವಾಗ, ಇಷ್ಟು ಚಿಕ್ಕ ವಿಷಯಕ್ಕೆ ಏಕೆ ಎಲ್ಲರೂ ಸುಮ್ಮನೆ ದೊಡ್ಡ ರಗಳೆಯನ್ನು ಹುಟ್ಟುಹಾಕುತ್ತಿದ್ದಾರೆ" ಎಂದು ಅಂದುಕೊಳ್ಳುತ್ತಿದ್ದೆ.
ಭಾರತವು ಒಂದು ಪ್ರಜಾಪ್ರಭುತ್ವ ರಾಷ್ಟ್ರವಾದ್ದರಿಂದ, ಇಲ್ಲಿ ಯಾವ ಆಲೋಚನೆಗೆ ಪ್ರಜೆಗಳ ಬಹುಮತ ಇರುವುದೋ, ಅದೇ ಆಲೋಚನೆ ಗೆಲ್ಲುತ್ತದೆ.
>> ಗೋಹತ್ಯೆ ಮಾಡಿದರೆ ಸಮಾಜದ ಒಂದು ವರ್ಗಕ್ಕೆ ನೋವಾಗುತ್ತದೆ.
>> ಗೋವನ್ನು ಕೊಲ್ಲದೇ ಹೋದರೆ ಸಮಾಜದ ಇನ್ನೊಂದು ವರ್ಗಕ್ಕೆ ನೋವಾಗುತ್ತದೆ!
>> ಹಾಗಾದರೆ, ಈ ಎರಡು ಕ್ರೀಯೆಗಳಲ್ಲಿ, ಯಾವ ಕ್ರೀಯೆಯಿಂದ ಹೆಚ್ಚಿನ ಜನರಿಗೆ ನೋವಾಗುತ್ತದೆ?
>> ಸಹಜವಾಗಿಯೇ, ಗೋವನ್ನು ಕೊಲ್ಲುವುದರಿಂದ ಹೆಚ್ಚಿನ ಜನರಿಗೆ ನೋವಾಗುತ್ತದೆ.
>> ಹಾಗಾದರೆ, ಗೋಹತ್ಯೆಯನ್ನು ನಿಷೇಧಿಸಿ.
ಗೋಮಾಂಸ ಲಭ್ಯವಿಲ್ಲ ಎನ್ನುವ ಒಂದೇ ಕಾರಣಕ್ಕೆ ಯಾರಾದರು ಹಸಿವಿನಿಂದ ಬಳಲಿ ಸಾಯುವಂತಹ ಸನ್ನಿವೇಶವಂತೂ ಇಲ್ಲವಲ್ಲ?!