ಗೂಗಲ್ ಕ್ರೋಮ್ ವೆಬ್ ಬ್ರೌಸರ್ ನಲ್ಲಿ ಪಾಪ್ ಅಪ್ ಸಕ್ರೀಯಗೊಳಿಸುವ ವಿಧಾನ
ಹಂತ ೧:
ನೀವು ಅನಿಸಿಕೆ ವಿಭಾಗವನ್ನು ತೆರೆಯುವಾಗ ಪಾಪ್ ಅಪ್ ಅನುಮತಿಸಿಲ್ಲದಿರುವ ಬಗ್ಗೆ ಸಂದೇಶವನ್ನು ಕಾಣಬಹುದು. ಇದು ಗೂಗಲ್ ಕ್ರೋಮ್ ಬ್ರೌಸರ್ ಜಾಲತಾನಗಳನ್ನು ಪಾಪ್ ಅಪ್ ತೆರೆಯುವುದರಿಂದ ನಿರ್ಭಂದಿಸಿದಾಗ ಗೋಚರಿಸುತ್ತದೆ.
ಹಂತ ೨:
ಬ್ರೌಸರ್ ನ ಅಡ್ರೆಸ್ ಬಾರ್ ನಲ್ಲಿ ಮೇಲ್ಭಾಗದ ಬಲಗೈ ಕಡೆ ಚಿಕ್ಕದಾದ ಕಿಟಕಿಯನ್ನು ನಿರ್ಭಂದಿಸುವ ಬಿಂಬವೊಂದನ್ನು ಕಾಣಬಹುದು. ಅದನ್ನು ಒತ್ತಿರಿ.
ಹಂತ ೩:
ಈಗ ಕಾಣುವ ಕಿಂಡಿಯಲ್ಲಿ "ಪಾಪ್ ಅಪ್ ಗಳನ್ನು ಯಾವಾಗಲೂ ಅನುಮತಿಸು" ಆಯ್ಕೆ ಮಾಡಿ "ಮುಗಿದಿದೆ" ಗುಂಡಿಯನ್ನು ಒತ್ತಿ.
ಹಂತ ೪:
ಈಗ ಅನಿಸಿಕೆ ಪುಟದಲ್ಲಿ ಹೇಳಿರುವಂತೆ, ಕಂಟ್ರೋಲ್ + ಫಂಕ್ಷನ್ ೫ ಗುಂಡಿಗಳನ್ನು ಒಟ್ಟಿಗೆ ಒತ್ತಿರಿ (Ctrl + F5).
ಹಂತ ೫:
ಈಗ ನೀವು ಅನಿಸಿಕೆ ಪುಟವನ್ನು ಯಶಸ್ವಿಯಾಗಿ ತಲುಪಿದ್ದೀರಿ.
ಪ್ರಮಾಣಿತ ತಾಣದಲ್ಲಿ ಇದನ್ನು ತೆರೆಯಿರಿ ಅಥವಾ ನಮ್ಮ ಪ್ರಮಾಣಿತ ತಾಣದ ಅನಿಸಿಕೆ ವಿಭಾಗಕ್ಕೆ ಭೇಟಿನೀಡಿ.