ಗೂಗಲ್ ಕ್ರೋಮ್ ಕನ್ನಡ ಆವೃತ್ತಿ - ಹಳತು ಹೊನ್ನು

ಕ್ಷಮಿಸಿ, ಈ ಚಿತ್ರವನ್ನು ಕೆಳಗಿಳಿಸಲಾಗಿಲ್ಲ! ದಯವಿಟ್ಟು ಪುಟವನ್ನು ಮರುಲೋಡ್ ಮಾಡಿ - Halatu Honnu

ಗೂಗಲ್ ಕ್ರೋಮ್ ವೆಬ್ ಬ್ರೌಸರನ್ನು ಕನ್ನಡದಲ್ಲಿ ಬಳಸಲು, ಅಂದರೆ ಕ್ರೋಮ್ ಯೂಸರ್ ಇಂಟರ್ಫೇಸನ್ನು ಕನ್ನಡಕ್ಕೆ ಹೊಂದಿಸಲು ಹೀಗೆ ಮಾಡಿ:


ನೆನಪಿರಲಿ, ಗೂಗಲ್ ಕ್ರೋಮ್ ಬೇರೆ-ಬೇರೆ ಭಾಷೆಗಳಿಗೆ ಬೇರೆ-ಬೇರೆ ಇಳಿಕೆಗಳು (ಡೌನ್ಲೋಡ್ಸ್) ಲಭ್ಯವಿಲ್ಲ, ಬದಲಿಗೆ ಒಂದೇ ಬ್ರೌಸರ್ ವಿವಿಧ ಭಾಷೆಗಳನ್ನು ಬೆಂಬಲಿಸುತ್ತದೆ. ನಿಮ್ಮ ಬಳಿ ಈಗಾಗಲೇ ಗೂಗಲ್ ಕ್ರೋಮ್ ಅನುಸ್ಥಾಪಿಸಲ್ಪಟ್ಟಿದ್ದರೆ ಕೆಳಗಿನ ಹಂತಗಳನ್ನು ಅನುಸರಿಸಿ. ಒಂದುವೇಳೆ ನಿಮ್ಮ ಬಳಿ ಗೂಗಲ್ ಕ್ರೋಮ್ ವೆಬ್ ಬ್ರೌಸರ್ ಇಲ್ಲದಿದ್ದರೆ ಅದನ್ನು ಇಲ್ಲಿಂದ ಉಚಿತವಾಗಿ ಪಡೆಯಿರಿ.



ಹಂತ ೧:

               ಗೂಗಲ್ ಕ್ರೋಮ್ ಸೆಟಿಂಗ್ಸ್ ತೆರೆಯಿರಿ.

ಕ್ಷಮಿಸಿ, ಈ ಚಿತ್ರವನ್ನು ಕೆಳಗಿಳಿಸಲಾಗಿಲ್ಲ! ದಯವಿಟ್ಟು ಪುಟವನ್ನು ಮರುಲೋಡ್ ಮಾಡಿ - Halatu Honnu


ಹಂತ ೨:

               "ಸುಧಾರಿತ ಸೆಟಿಂಗ್ಸ್ ತೋರಿಸು (ಶೋ ಅಡ್ವಾನ್ಸ್ಡ್ ಸೆಟಿಂಗ್ಸ್)" ಮೇಲೆ ಒತ್ತಿ.

ಕ್ಷಮಿಸಿ, ಈ ಚಿತ್ರವನ್ನು ಕೆಳಗಿಳಿಸಲಾಗಿಲ್ಲ! ದಯವಿಟ್ಟು ಪುಟವನ್ನು ಮರುಲೋಡ್ ಮಾಡಿ - Halatu Honnu


ಹಂತ ೩:

               "ಭಾಷೆ ಮತ್ತು ಇನ್ಫುಟ್ ಸೆಟಿಂಗ್ಸ್ (ಲ್ಯಾನ್ಗ್ವೇಜ್ ಮತ್ತು ಇನ್ಫುಟ್ ಸೆಟಿಂಗ್ಸ್)" ಒತ್ತಿ.



ಹಂತ ೪:

               "ಸೇರಿಸು" ಗುಂಡಿಯನ್ನು ಒತ್ತಿ.



ಹಂತ ೫:

               "ಭಾಷೆಗಳ ಪಟ್ಟಿ (ಲಿಸ್ಟ್ ಆಫ್ ಲ್ಯಾನ್ಗ್ವೇಜಸ್)" ತೆರೆದುಕೊಳ್ಳುತ್ತದೆ. ಈ ಪಟ್ಟಿಯಲ್ಲಿ ಕನ್ನಡ ಆಯ್ಕೆ ಮಾಡಿ "ಸರಿ (ಓಕೆ)" ಒತ್ತಿ.






ಹಂತ ೬:

               ಈಗ "ಗೂಗಲ್ ಕ್ರೋಮನ್ನು ಈ ಭಾಷೆಯಲ್ಲಿ ತೋರಿಸು (ಡಿಸ್ಪ್ಲೇ ಗೂಗಲ್ ಕ್ರೋಮ್ ಇನ್ ದಿಸ್ ಲ್ಯಾನ್ಗ್ವೇಜ್)" ಒತ್ತಿ. ನೀವು ಬೇರೆ ಭಾಷೆಯಲ್ಲಿರುವ ಪುಟಗಳನ್ನು ಜಾಲಾಡುವಾಗ ಅವುಗಳನ್ನು ಕನ್ನಡಕ್ಕೆ ಅನುವಾದಿಸಬೇಕೆಂದರೆ (ಅಥವಾ ಅವುಗಳನ್ನು ಕನ್ನಡದಲ್ಲಿ ನೋಡಬೇಕೆಂದರೆ) "ಪುಟಗಳನ್ನು ಈ ಭಾಷೆಯಲ್ಲಿ ಅನುವಾದ ಮಾಡಲು ಅವಕಾಶ (ಆಫರ್ ಟು ಟ್ರಾನ್ಸ್ಲೇಟ್ ಪೇಜಸ್ ಇನ್ ದಿಸ್ ಲ್ಯಾನ್ಗ್ವೇಜ್)" ಅನ್ನು ಆಯ್ಕೆ ಮಾಡಿ. ಕೊನೆಯಲ್ಲಿ "ಮುಗಿದಿದೆ (ಫಿನಿಷ್ಡ್)" ಒತ್ತಿ.




ಹಂತ ೭:

               ಈಗ ತೆರೆದಿರುವ ಎಲ್ಲ ಕ್ರೋಮ್ ಬ್ರೌಸರ್ಗಳನ್ನು ಮುಚ್ಚಿ ಪುನಃ ತೆರೆಯಿರಿ. ಮತ್ತು ನಿಮ್ಮ ಕ್ರೋಮ್ ಈಗ ಕನ್ನಡದಲ್ಲಿರುವುದನ್ನು ಕಂಡು ಆನಂದಿಸಿ :)