ಕಡತ ಹಾಗೂ ಮಡಿಚೋಲೆ (ಫೋಲ್ಡರ್) ಗಳನ್ನು ಕನ್ನಡದಲ್ಲಿ ಮರುಹೆಸರಿಸುವ ಹಂತಗಳನ್ನು ಇಲ್ಲಿ ವಿವರಿಸಲಾಗಿದೆ.
ಹಂತ ೧:
ಬೇಕಾದ ಕಡತ ಅಥವಾ ಫೋಲ್ಡರ್ ಮೇಲೆ ಬಲ ಮೌಸ್ ಗುಂಡಿ ಒತ್ತಿ (ರೈಟ್ ಕ್ಲಿಕ್ ಮಾಡಿ). ನಂತರ ತೆರೆಯುವ ಕಾಂಟೆಕ್ಸ್ಟ್ ಮೆನುವಿನಲ್ಲಿ "ಮರುಹೆಸರಿಸು (ರೀನೇಮ್)" ಒತ್ತಿ.
ಹಂತ ೨:
ಟಾಸ್ಕ್ ಬಾರಿನಲ್ಲಿರುವ ಭಾಷಾ ಬಿಂಬದಲ್ಲಿ "ಕ Kannada (ಕನ್ನಡ - ಮೈಕ್ರೋಸೋಫ್ಟ್ ಇಂಡಿಕ್ ಲ್ಯಾನ್ಗ್ವೇಜ್ ಇನ್ಫುಟ್ ಟೂಲ್)" ಆಯ್ಕೆಯನ್ನು ಒತ್ತಿ. ನಿಮ್ಮ ಗಣಕದಲ್ಲಿ ಈ ಆಯ್ಕೆಯು ಕಾಣಿಸುತ್ತಿಲ್ಲವೇ? ಹಾಗಿದ್ದರೆ ಇಲ್ಲೊಮ್ಮೆ ಇಣುಕಿ.
ಹಂತ ೩:
ಈಗ ನಿಮಗೆ ಬೇಕಾದ ಹೆಸರನ್ನು ಛಾಪಿಸಿ (ಟೈಪ್ ಮಾಡಿ). ಕೊನೆಯಲ್ಲಿ "ಎಂಟರ್" ಒತ್ತಿ.
ಹಂತ ೪:
ಶುಭಾಷಯಗಳು! ನೀವೀಗ ಕಡತ ಅಥವಾ ಫೋಲ್ದ್ದರ್ ಒಂದನ್ನು ಕನ್ನಡದಲ್ಲಿ ಮರುಹೆಸರಿಸಿದ್ದೀರಿ!
ಪ್ರಮಾಣಿತ ತಾಣದಲ್ಲಿ ಇದನ್ನು ತೆರೆಯಿರಿ ಅಥವಾ ನಮ್ಮ ಪ್ರಮಾಣಿತ ತಾಣದ ಅನಿಸಿಕೆ ವಿಭಾಗಕ್ಕೆ ಭೇಟಿನೀಡಿ.