ರುಪಾಯಿ ಸಂಕೇತದ ಬಳಕೆ - ಹಳತು ಹೊನ್ನು

ಈ ಚಿತ್ರವನ್ನು ಕೆಳಗಿಳಿಸಲಾಗುತ್ತಿಲ್ಲ! ದಯವಿಟ್ಟು ಪುಟವನ್ನು ಮರುಲೋಡ್ ಮಾಡಿ - ಹಳತು ಹೊನ್ನು

ರುಪಾಯಿ ಸಂಕೇತವನ್ನು ಬಳಸುವುದು ಹೇಗೆಂದು ತಿಳಿಯಲು ಇಲ್ಲಿ ಪಟ್ಟಿ ಮಾಡಿರುವ ಹಂತಗಳನ್ನು ಅನುಸರಿಸಿ.

ಹಂತ ೧:

             ರುಪಾಯಿ ಸಂಕೇತದ ಲಿಪಿಯನ್ನು ಇಲ್ಲಿಂದ ಕೆಳಗಿಳಿಸಿ.

ಹಂತ ೨:

             ಇಳಿಸಿರುವ ಕಡತಜಾಗವನ್ನು ತೆರೆಯಿರಿ, ಮತ್ತು ಇಲ್ಲಿಂದ ಮುಂದುವರಿಯಲು ಎರಡು ವಿಧಾನಗಳಿವೆ. ಅವುಗಳನ್ನು ಮುಂದೆ ವಿವರಿಸಲಾಗಿದೆ. ಯಾವುದೇ ಒಂದು ವಿಧಾನವನ್ನು ಅನುಸರಿಸಿದರೆ ಸಾಕು.

ಈ ಚಿತ್ರವನ್ನು ಕೆಳಗಿಳಿಸಲಾಗುತ್ತಿಲ್ಲ! ದಯವಿಟ್ಟು ಪುಟವನ್ನು ಮರುಲೋಡ್ ಮಾಡಿ - ಹಳತು ಹೊನ್ನು

ವಿಧಾನ ಒಂದು

ಹಂತ ೧:
             ಇಳಿಸಿರುವ "Rupee_Foradian.ttf" ಕಡತದ ಮೇಲೆ ಬಲ-ಗುಂಡಿ ಒತ್ತಿ. ತೆರೆಯುವ ಸಂದರ್ಭ ಮೆನುವಿನಲ್ಲಿ "ಸ್ಥಾಪಿಸು ( ಇನ್ಸ್ಟಾಲ್ )" ಆಯ್ಕೆಮಾಡಿ.

ಈ ಚಿತ್ರವನ್ನು ಕೆಳಗಿಳಿಸಲಾಗುತ್ತಿಲ್ಲ! ದಯವಿಟ್ಟು ಪುಟವನ್ನು ಮರುಲೋಡ್ ಮಾಡಿ - ಹಳತು ಹೊನ್ನು

ಹಂತ ೨:
             ಲಿಪಿಯು ನಿಮ್ಮ ಗಣಕಕ್ಕೆ ಸ್ಥಾಪಿತವಾಗಲು ಆರಂಭವಾಗುತ್ತದೆ. ತುಸು ತಾಳ್ಮೆಯಿಂದಿರಿ. ಸ್ಥಾಪನೆ ಮುಗಿದ ತಕ್ಷಣ ಕೆಳಗೆ ತೋರಿಸಿರುವ ಸೂಚನಾ ಕಿಂಡಿ (ಪಾಪ್ ಅಪ್ ವಿಂಡೊ) ಸ್ವಯಂಚಾಲಿತವಾಗಿ ಮುಚ್ಚಿಕೊಳ್ಳುತ್ತದೆ.

             ಲಿಪಿಯು ಸ್ಥಾಪನೆಗೊಂಡಮೇಲೆ ಮುಖ್ಯ ಹಂತ ೩ ರಿಂದ ಮುಂದುವರೆಯಿರಿ.

ವಿಧಾನ ಎರಡು

ಹಂತ ೧:
             ಕೆಳಗಿಳಿಸಿದ ಲಿಪಿ-ಕಡತದ ಮೇಲೆ ಬಲ-ಗುಂಡಿ ಒತ್ತಿದಾಗ ತೆರೆಯುವ ಸಂದರ್ಭ ಮೆನುವಿನಲ್ಲಿ "ಮುನ್ನೋಟ (ಪ್ರಿವ್ಯೂ)" ಆಯ್ಕೆಮಾಡಿ.

ಈ ಚಿತ್ರವನ್ನು ಕೆಳಗಿಳಿಸಲಾಗುತ್ತಿಲ್ಲ! ದಯವಿಟ್ಟು ಪುಟವನ್ನು ಮರುಲೋಡ್ ಮಾಡಿ - ಹಳತು ಹೊನ್ನು

ಹಂತ ೨:
             ತೆರೆಯುವ ಲಿಪಿ-ಕಿಂಡಿಯಲ್ಲಿ ಸ್ಥಾಪಿಸು/ಇನ್ಸ್ಟಾಲ್ ಗುಂಡಿ ಒತ್ತಿ.

ಈ ಚಿತ್ರವನ್ನು ಕೆಳಗಿಳಿಸಲಾಗುತ್ತಿಲ್ಲ! ದಯವಿಟ್ಟು ಪುಟವನ್ನು ಮರುಲೋಡ್ ಮಾಡಿ - ಹಳತು ಹೊನ್ನು

ಹಂತ ೩:
             ಲಿಪಿಯು ನಿಮ್ಮ ಗಣಕಕ್ಕೆ ಸ್ಥಾಪಿತವಾಗಲು ಆರಂಭವಾಗುತ್ತದೆ. ತುಸು ತಾಳ್ಮೆಯಿಂದಿರಿ. ಸ್ಥಾಪನೆ ಮುಗಿದ ತಕ್ಷಣ ಕೆಳಗೆ ತೋರಿಸಿರುವ ಸೂಚನಾ ಕಿಂಡಿ (ಪಾಪ್ ಅಪ್ ವಿಂಡೊ) ಸ್ವಯಂಚಾಲಿತವಾಗಿ ಮುಚ್ಚಿಕೊಳ್ಳುತ್ತದೆ.

ಈ ಚಿತ್ರವನ್ನು ಕೆಳಗಿಳಿಸಲಾಗುತ್ತಿಲ್ಲ! ದಯವಿಟ್ಟು ಪುಟವನ್ನು ಮರುಲೋಡ್ ಮಾಡಿ - ಹಳತು ಹೊನ್ನು

ಹಂತ ೩:

             ಸ್ಥಾಪಿತಗೊಂಡಿರುವ ರುಪಾಯಿ ಸಂಕೇತವನ್ನು ಬಳಸಲು/ಪರೀಕ್ಷಿಸಲು ಹೊಸ ಕಡತವೊಂದನ್ನು ತೆರೆಯಿರಿ. ನಾನಿಲ್ಲಿ ನೋಟ್ ಪ್ಯಾಡ್ ಬಳಸುತ್ತಿರುವೆ. ಇದರಲ್ಲಿ "ಸ್ವರೂಪ (ಫಾರ್ಮ್ಯಾಟ್)" ಪಟ್ಟಿಯಿಂದ "ಲಿಪಿ (ಫೊಂಟ್)" ಆಯ್ಕೆಯನ್ನು ಒತ್ತಿ.

ಈ ಚಿತ್ರವನ್ನು ಕೆಳಗಿಳಿಸಲಾಗುತ್ತಿಲ್ಲ! ದಯವಿಟ್ಟು ಪುಟವನ್ನು ಮರುಲೋಡ್ ಮಾಡಿ - ಹಳತು ಹೊನ್ನು

ಹಂತ ೪:

             ತೆರೆಯುವ ಕಿಂಡಿಯಲ್ಲಿ "ರುಪಾಯಿ ಫೊರಾಡಿಯನ್ Rupee Foradian" ಲಿಪಿಯನ್ನು ಆಯ್ಕೆಮಾಡಿ, "ಸರಿ/ಓ‌ಕೆ" ಒತ್ತಿ.

ಈ ಚಿತ್ರವನ್ನು ಕೆಳಗಿಳಿಸಲಾಗುತ್ತಿಲ್ಲ! ದಯವಿಟ್ಟು ಪುಟವನ್ನು ಮರುಲೋಡ್ ಮಾಡಿ - ಹಳತು ಹೊನ್ನು

ಹಂತ ೫:

             ಈಗ ಕಡತದಲ್ಲಿ ರುಪಾಯಿ ಸಂಕೇತವನ್ನು ಛಾಪಿಸಲು (ಟೈಪ್ ಮಾಡಲು) ನಿಮ್ಮ ಕೀಲಿಮಣಿಯ ( ` ) ಟಿಲ್ಡ್ ( Tilde ) ಗುಂಡಿ ಒತ್ತಿ.

ಈ ಚಿತ್ರವನ್ನು ಕೆಳಗಿಳಿಸಲಾಗುತ್ತಿಲ್ಲ! ದಯವಿಟ್ಟು ಪುಟವನ್ನು ಮರುಲೋಡ್ ಮಾಡಿ - ಹಳತು ಹೊನ್ನು

ಹಂತ ೬:

             ಇನ್ನೇನು, ರುಪಾಯಿ ಸಂಕೇತ ಕೆಳತೋರಿಸಿದಂತೆ ಕಡತದಲ್ಲಿ ಮೂಡಬೇಕು. ಅಲ್ಲಿಗೆ ನೀವು ಯಶಸ್ವಿಯಾಗಿ ರುಪಾಯಿ ಸಂಕೇತವನ್ನು ಬಳಸಬಹುದು. ಇದೇ ರೀತಿ ಯಾವುದೇ ತಂತ್ರಾಂಶದಲ್ಲಿಯೂ "ರುಪಾಯಿ ಫೊರಾಡಿಯನ್ Rupee Foradian" ಲಿಪಿಯನ್ನು ಆಯ್ಕೆಮಾಡುವುದರ ಮೂಲಕ ನೀವು ಸಂಕೇತವನ್ನು ಪಡೆಯಬಹುದು.